Lok Sabha Election 2024: ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಆಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅ‌ನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕರೆ ನೀಡಿದರು. 


COMMERCIAL BREAK
SCROLL TO CONTINUE READING

ಬೆಂಗಳೂರು ದಕ್ಷಿಣ ಕ್ಷೇತ್ರ (Bangalore South Lok Sabha Constituency)ದಲ್ಲಿ ಸೌಮ್ಯರೆಡ್ಡಿ ಪರವಾಗಿ ಎರಡನೇ ದಿನ ಬಿರುಸಿನ ರೋಡ್ ಶೋ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿಸೂರ್ಯ ಅವರ ಸರಣಿ ವೈಫಲ್ಯಗಳನ್ನು ಜನರ ಮುಂದಿಟ್ಟು ಸೌಮ್ಯರೆಡ್ಡಿ ಗೆಲ್ಲಿಸುವಂತೆ ಕರೆ ನೀಡಿದರು.  


ಇದನ್ನೂ ಓದಿ- Lok Sabha Election 2024: ಶೀಘ್ರದಲ್ಲೇ ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ (Drinking Water) ಕಾವೇರಿ ಸಂಪರ್ಕ ಇನ್ನಷ್ಟು ಆಗಬೇಕಿದೆ. ಈಗ ಆಗಿರುವುದು ಶೇ.60 ರಷ್ಟು ಮಾತ್ರ. ಆದ್ದರಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯರೆಡ್ಡಿ (Sowmya Reddy) ಅವರ ಗೆಲುವು ಅತ್ಯಗತ್ಯ ಎಂದವರು ಹೇಳಿದರು. 


ಇದನ್ನೂ ಓದಿ- ಚುನಾವಣೆ ವೇಳೆ ಕಾರ್ಯನಿರ್ವಹಿಸಲು ತಮ್ಮ ಬೇಡಿಕೆ ಈಡೇರಿಸಬೇಕು: ಆಶಾ ಕಾರ್ಯಕರ್ತೆರ ಆಗ್ರಹ!


ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ. ಕೋರ್ಟ್ ನಲ್ಲಿ ನ್ಯಾಯ ಸಿಗುತ್ತದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ನೀವು ನ್ಯಾಯ ಕೊಡಿ  ಎಂದು  ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.